ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - 2015
ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಹಣದಿಂದ ಕೊಳ್ಳಬಹುದು; ಎಲ್ಲವೂ ಮಾರಾಟಕ್ಕಿದೆ; ಎಲ್ಲವೂ ಮಾರಾಟಗೊಳ್ಳುವುದಕ್ಕೋಸ್ಕರವಾಗಿಯೇ ಇದೆ ಎನ್ನುವಂತಹ ವಾತಾವರಣ ಸೃಷ್ಟಿಗೊಂಡಿದೆ. ಅದನ್ನು ಕೊಳ್ಳಲು ಶತಾಯಗತಾಯವಾಗಿಯಾದರೂ, ಅನೈತಿಕವಾಗಿಯಾದರೂ ಹಣಗಳಿಸು ಎನ್ನುವಂತಹ ಕೆಟ್ಟ ಕೊಳಕು ಉತ್ಸಾಹ ಕಂಡುಬರುತ್ತಿದೆ.
ಈಗ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಎಲ್ಲಾ ಚಟುವಟಿಕೆಗಳು ಗರಿಗೆದರುವ ಸುಸಮಯ.! ಕಾರಣ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಮತದಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪದಿಂದ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸ್ವಾಭಿಮಾನಿ ಮತದಾರರ ಆಂದೋಲನವನ್ನು ಪ್ರಾರಂಭಿಸಿದೆ.
ಪ್ರಜಾಪ್ರಭುತ್ವದ ಪವಿತ್ರ ಜಾತ್ರೆಯಾಗಿರುವ ಈ ಚುನಾವಣೆ ಓಟು ಕೊಳ್ಳುವ ಮಾರುಕಟ್ಟೆ, ಜನರು ತಮ್ಮನ್ನು ತಾವು ಹರಾಜು ಹಾಕುವ ತಾಣ ಎಂಬಂತೆ ವರ್ತಿಸುವ ರಾಜಕೀಯ ಪಕ್ಷಗಳಿಗೆ, ಸ್ವಾಭಿಮಾನಿ ಮತದಾರರಾದ ನಾವು ದೇಶದ ಭವಿಷ್ಯಕ್ಕೆ ಅರ್ಥಪೂರ್ಣ ದಾರಿ ತೋರಿಸುವ ಛಾತಿ ನಮಗಿದೆ ಎಂದು ತೋರಿಸುವ ಸಂದರ್ಭ ಇದಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ಕಡೆಗಳಲ್ಲಿ ನಡೆದ ಅಭಿಯಾನದ ಛಾಯಾಚಿತ್ರಗಳು, ಅದರ ವಿವಿಧ ಸಾಮಗ್ರಿಗಳು ಇಲ್ಲಿವೆ.

ಅಂಪಾರು - ತಲಕಲ್ಲುಗುಡ್ಡೆ ಪ್ರದೇಶ
|
ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿ
|
ಹಟ್ಟಿಯಂಗಡಿ - ಕನ್ಯಾನ ಪ್ರದೇಶ
|
ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿ
|
ಮಡಾಮಕ್ಕಿ - ಶೇಡಿಮನೆ ಪ್ರದೇಶ
|
ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿ
|
ಈ ಅಭಿಯಾನದಲ್ಲಿ ಬಳಸಿದ ಕರಪತ್ರ, ಸ್ಟಿಕ್ಕರ್, ಬ್ಯಾಡ್ಜ್, ಅಭ್ಯರ್ಥಿಗಳ ಘೋಷಣೆ ಮುಂತಾದ ಸಾಮಗ್ರಿಗಳು
ಅಭ್ಯರ್ಥಿಗಳ ಘೋಷಣೆ | |
File Size: | 33 kb |
File Type: |
ಅಭಿಯಾನದ ಕರಪತ್ರ | |
File Size: | 271 kb |
File Type: |
ಪಂ.ರಾ. ವಿಧೇಯಕದ ಮಹತ್ವದ ಅಂಶಗಳು | |
File Size: | 64 kb |
File Type: |
ಪಂ.ರಾ.ತಿದ್ದುಪಡಿ ಸಮಿತಿಯ ವರದಿಯ ಮುಖ್ಯಾಂಶಗಳು | |
File Size: | 65 kb |
File Type: |