ವಿವಿಧ ಪ್ರದೇಶದ, ವಿವಿಧ ಭಾಷೆಯ ಹಲವಾರು ಮತದಾರರು, ಗಣ್ಯರು "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" ಎಂದು ಧೃಡವಾಗಿ ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಅಂತೆಯೇ ಕೆಲವು ಅಭ್ಯರ್ಥಿಗಳು, ರಾಜಕಾರಣಿಗಳು "ತಾವು ಮತವನ್ನು ಕೊಂಡುಕೊಳ್ಳುವುದಿಲ್ಲ, ಜನಪರ ಕೆಲಸ ಮಾಡಿ ಮತ ಗಳಿಸುತ್ತೇವೆ" ಎಂದಿದ್ದಾರೆ. ಅಲ್ಲದೇ ಅನೇಕ ಗಣ್ಯರು ಚುನಾವಣೆಯ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಹೇಳಿಕೆಗಳ ವಿವಿಧ ದೃಶ್ಯ ಚಿತ್ರಣಗಳು ಇಲ್ಲಿವೆ.
The Campaign. How it began.
|
ಸ್ಟಾರ್ ಪ್ಲಸ್ ಹಿಂದಿ ಚ್ಯಾನಲ್-ನ ಸತ್ಯಮೇವಜಯತೆ ಕಾರ್ಯಕ್ರಮದವರು "ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ" ಅಭಿಯಾನವನ್ನು ಚಿತ್ರೀಕರಿಸಿದ್ದಾರೆ. ಆ ಕಾರ್ಯಕ್ರಮದ ಅಂತರ್ಜಾಲ ತಾಣದಲ್ಲಿ ಈ ದೃಶ್ಯ ಚಿತ್ರಣವನ್ನು ಹಾಕಲಾಗಿದೆ. ಅದಕ್ಕೆ ಸಂಬಂಧಿಸಿದ ಲಿಂಕ್ ಈ ಕೆಳಗಿದೆ.
ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ - ಸತ್ಯಮೇವ ಜಯತೆ ಕಾರ್ಯಕ್ರಮದ ಚಿತ್ರೀಕರಣ |
|
|
2013 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರ ಸಮಸ್ಯೆಯು ತನ್ನ ಪ್ರಾಬಲ್ಯವನ್ನು ಮೆರೆದಿದೆ. ಇದಕ್ಕೆ ಚೊಕ್ಕ ಅಭ್ಯರ್ಥಿಗಳ ಆಯ್ಕೆಯೇ ಸರಳ ಪ್ರತಿಕ್ರಿಯೆಯಾಗಿದೆ. ಈ ವೀಡಿಯೋ ಲಿಂಕ್-ಗಳು ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಪ್ರಜಾಪ್ರಭುತ್ವದಲ್ಲಿ ನಾಗರಿಕರ ಹಕ್ಕುಗಳ ದೊಡ್ಡ ಚಿತ್ರಣ ಹಾಗೂ ನೈಜ ಕಾಳಜಿ, ಅಲ್ಲದೇ ನಮ್ಮ ಸಂವಿಧಾನದಲ್ಲಿ ನಮಗೆ ನಾವೇ ನೀಡಿಕೊಂಡ ಪ್ರಮಾಣಗಳ ಮೇಲೆ ಬೆಳಕು ಚೆಲ್ಲುತ್ತವೆ. ಈ ಕುರಿತಾಗಿ ಅನೇಕ ಚಿಂತಕರು ಮಾತನಾಡಿದ ವೀಡಿಯೋ ಲಿಂಕ್-ಗಳು ಇಲ್ಲಿವೆ:
|
|