ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - 2016
''ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ''
ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಹಣದಿಂದ ಕೊಳ್ಳಬಹುದು; ಎಲ್ಲವೂ ಮಾರಾಟಕ್ಕಿದೆ; ಎಲ್ಲವೂ ಮಾರಾಟಗೊಳ್ಳುವುದಕ್ಕೋಸ್ಕರವಾಗಿಯೇ ಇದೆ ಎನ್ನುವಂತಹ ವಾತಾವರಣ ಸೃಷ್ಟಿಗೊಂಡಿದೆ. ಅದನ್ನು ಕೊಳ್ಳಲು ಶತಾಯಗತಾಯವಾಗಿಯಾದರೂ, ಅನೈತಿಕವಾಗಿಯಾದರೂ ಹಣಗಳಿಸು ಎನ್ನುವಂತಹ ಕೆಟ್ಟ ಕೊಳಕು ಉತ್ಸಾಹ ಕಂಡುಬರುತ್ತಿದೆ.
ಈಗ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಎಲ್ಲಾ ಚಟುವಟಿಕೆಗಳು ಗರಿಗೆದರುವ ಸುಸಮಯ.! ಕಾರಣ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಮತದಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪದಿಂದ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸ್ವಾಭಿಮಾನಿ ಮತದಾರರ ಆಂದೋಲನವನ್ನು ಪ್ರಾರಂಭಿಸಿದೆ.
ಪ್ರಜಾಪ್ರಭುತ್ವದ ಪವಿತ್ರ ಜಾತ್ರೆಯಾಗಿರುವ ಈ ಚುನಾವಣೆ ಓಟು ಕೊಳ್ಳುವ ಮಾರುಕಟ್ಟೆ, ಜನರು ತಮ್ಮನ್ನು ತಾವು ಹರಾಜು ಹಾಕುವ ತಾಣ ಎಂಬಂತೆ ವರ್ತಿಸುವ ರಾಜಕೀಯ ಪಕ್ಷಗಳಿಗೆ, ಸ್ವಾಭಿಮಾನಿ ಮತದಾರರಾದ ನಾವು ದೇಶದ ಭವಿಷ್ಯಕ್ಕೆ ಅರ್ಥಪೂರ್ಣ ದಾರಿ ತೋರಿಸುವ ಛಾತಿ ನಮಗಿದೆ ಎಂದು ತೋರಿಸುವ ಸಂದರ್ಭ ಇದಾಗಿದೆ.
ಈ ನಿಟ್ಟಿನಲ್ಲಿ ವಿವಿಧ ಕಡೆಗಳಲ್ಲಿ ನಡೆದ ಅಭಿಯಾನದ ಛಾಯಾಚಿತ್ರಗಳು:

ಬಿಜೂರು ಗ್ರಾಮ ಪಂಚಾಯತ್
|
ಕೊಲ್ಲೂರು ಗ್ರಾಮ ಪಂಚಾಯತ್
|