ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - 2019
''ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ''
ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಹಣದಿಂದ ಕೊಳ್ಳಬಹುದು; ಎಲ್ಲವೂ ಮಾರಾಟಕ್ಕಿದೆ; ಎಲ್ಲವೂ ಮಾರಾಟಗೊಳ್ಳುವುದಕ್ಕೋಸ್ಕರವಾಗಿಯೇ ಇದೆ ಎನ್ನುವಂತಹ ವಾತಾವರಣ ಸೃಷ್ಟಿಗೊಂಡಿದೆ. ಅದನ್ನು ಕೊಳ್ಳಲು ಶತಾಯಗತಾಯವಾಗಿಯಾದರೂ, ಅನೈತಿಕವಾಗಿಯಾದರೂ ಹಣಗಳಿಸು ಎನ್ನುವಂತಹ ಕೆಟ್ಟ ಕೊಳಕು ಉತ್ಸಾಹ ಕಂಡುಬರುತ್ತಿದೆ.
ಈಗ ಬಂದಿರುವ ಲೋಕಸಭಾ ಚುನಾವಣೆ -2019 ಈ ಎಲ್ಲಾ ಚಟುವಟಿಕೆಗಳ ರಂಗಸಜ್ಜಿಕೆಯಾಗಿ ನಿಂತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಮತದಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪದಿಂದ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸ್ವಾಭಿಮಾನಿ ಮತದಾರರ ಆಂದೋಲನವನ್ನು ಪ್ರಾರಂಭಿಸಿದೆ.
ಪ್ರಜಾಪ್ರಭುತ್ವದ ಪವಿತ್ರ ಜಾತ್ರೆಯಾಗಿರುವ ಈ ಚುನಾವಣೆ ಓಟು ಕೊಳ್ಳುವ ಮಾರುಕಟ್ಟೆ, ಜನರು ತಮ್ಮನ್ನು ತಾವು ಹರಾಜು ಹಾಕುವ ತಾಣ ಎಂಬಂತೆ ವರ್ತಿಸುವ ರಾಜಕೀಯ ಪಕ್ಷಗಳಿಗೆ, ಸ್ವಾಭಿಮಾನಿ ಮತದಾರರಾದ ನಾವು ದೇಶದ ಭವಿಷ್ಯಕ್ಕೆ ಅರ್ಥಪೂರ್ಣ ದಾರಿ ತೋರಿಸುವ ಛಾತಿ ನಮಗಿದೆ ಎಂದು ತೋರಿಸುವ ಸಂದರ್ಭ ಇದಾಗಿದೆ.
ಈ ನಿಟ್ಟಿನಲ್ಲಿ ದೇಶದ, ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಅಭಿಯಾನದ ಆಯ್ದ ಭಾವಚಿತ್ರಗಳು, ಪತ್ರಿಕಾ ವರದಿಗಳು, ಅಭ್ಯರ್ಥಿಗಳ-ರಾಜಕಾರಣಿಗಳ-ಗಣ್ಯರ ಮಾತುಗಳನ್ನೊಳಗೊಂಡ ದೃಶ್ಯ ಚಿತ್ರಣಗಳು, ಲೇಖನಗಳು, ಇದೇ ರೀತಿಯ ಅಭಿಯಾನದ ವಿವಿಧ ವರದಿಗಳು ಇಲ್ಲಿವೆ.

ಹಿಂದಿನ ವರ್ಷಗಳ ಅಭಿಯಾನಗಳತ್ತ ನೋಟ...
- 2018ರ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಅಭಿಯಾನ
- 2016 ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಸಮಯದಲ್ಲಿ ಅಭಿಯಾನ
- 2015 ರ ಗ್ರಾಮ ಪಂಚಾಯತ್ ಚುನಾವಣೆ ಸಮಯದಲ್ಲಿ ಅಭಿಯಾನ
- 2014 ರ ಲೋಕಸಭಾ ಚುನಾವಣೆ ಸಮಯದಲ್ಲಿ ಅಭಿಯಾನ
- 2013 ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಅಭಿಯಾನ
- 2010ರ ಗ್ರಾಮ ಪಂಚಾಯತ್ ಚುನಾವಣೆ ಸಮಯದಲ್ಲಿ ಅಭಿಯಾನ
- 2010ರ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಸಮಯದಲ್ಲಿ ಅಭಿಯಾನ